ನಿನ್ನ ಭೇಟಿ ಮಾಡುವ ಬಯಕೆ
ಆದರೇಕೋ ಹಿಂಜರಿಕೆ
ನಾ ಆಮಂತ್ರಣ ನೀಡಿದರೆ
ನೀ ಬಾರದೆ ಹೋದರೆ
ನನ್ನ ಮನದ ಮಾತುಗಳೆಲ್ಲ
ಮೌನಕ್ಕೆ ಶರಣಾಗುತ್ತಿದ್ದವಲ್ಲ
ನಾನೀ ದ್ವಂದ್ವದಲ್ಲಿ ಮುಳುಗಿದ್ದಾಗ
ಅತ್ತಲಿಂದ ನಿನ್ನ ಕರೆ ಬಂದಾಗ
ಮೌನದ ಬಲೆಯಲ್ಲಿ ಸಿಲುಕಿದ ಪದಗಳೆಲ್ಲ
ಮಾತುಗಳಾಗಿ ಹೊರಬರಲು ಹಾತೊರೆಯುತ್ತಿರುವುದಲ್ಲ
No comments:
Post a Comment