ನಾಯಿಯನ್ನು (ನಾಯಿ ಇದೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರುವ) ಸಾಕಿರುವ ಬೆಂಗಳೂರಿನ ಬಾಂಧವರೆಲ್ಲರಿಗೂ ನನ್ನ ನಮಸ್ಕಾರಗಳು.
ಏನ್ರಣ್ಣ ಚೆನ್ನಾಗಿದ್ದೀರಾ?.
ನಿಮ್ಮ ನಾಯಿ ಚೆನ್ನಾಗಿದೆಯಾ?.
ನಿಮ್ಮ ನಾಯಿಗೆ ನೀವು ತಿನ್ನೋ ತಿಂಡಿ/ಊಟನೆ ಕೊಡ್ತೀರಲ್ಲ.... ಇಲ್ಲಂದ್ರೆ ಅದಕ್ಕೆ ವಿಶೇಷವಾಗಿರೋ ಸ್ನ್ಯಾಕ್ಸ್ ಕೊಡ್ತೀರಾ...
ನಿಮ್ಮ ಸೋಫಾ ಮೇಲೆ ಮಲಗಿಸಿಕೊಳ್ತೀರಾ...ಇಲ್ಲಂದ್ರೆ ಅದಕ್ಕೆ ಒಂದು ರೂಮ್ ಮಾಡ್ಸಿರ್ತೀರಾ...
ಎಲ್ಲ ಸರಿ...ಆದ್ರೆ....
ಎಲ್ಲ ವ್ಯವಸ್ತೆ ಮಾಡೋ ನೀವು ಅದಕ್ಕೆ ಒಂದು ಟಾಯ್ಲೆಟ್ ಮಾಡೋಕಾಗಲ್ವ?
ಸಾರ್ವಜನಿಕರು ಉಪಯೋಗಿಸೋ ಜಾಗನ ಹೊಲಸು ಮಾಡೋಕೆ ನಿಮಗೆ ಅನುಮತಿ ಕೊಟ್ಟೋರು ಯಾರು?
ಅಪರಿಚಿತರನ್ನು ನಿಮ್ಮ ಮನೆಗೆ ಬಿಡದ ನಾಯಿಯನ್ನ ಅಪರಿಚಿತ ಜಾಗಕ್ಕೆ ಕರೆದುಕೊಂಡು ಹೋಗಿ ಯಾಕೆ ಹಾಳು ಮಾಡ್ತೀರಾ?
ಏನಂತೀರಾ??
No comments:
Post a Comment