ನೀವೆಲ್ಲ, ಲಾಲೂ ಬಜೆಟ್ ಟಿ.ವಿ ಯಲ್ಲಿ, ಪೇಪರ್ನಲ್ಲಿ ನೋಡಿರ್ತೀರ, ರೈಲ್ವೆ ಇಲಾಖೆ ಬಾರೀ ಲಾಭದಲ್ಲಿ ಇದೆ ಅನ್ನೋದನ್ನು ಕೇಳಿರ್ತೀರ, ಆದರೆ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕತೆ ಕೇಳಿ....
ನಾವು ಹೋದವಾರ ಸಕಲೇಶಪುರ ಟ್ರೆಕ್ ಹೋದಾಗ, ಸಂಜೆ 7 ಘಂಟೆಗೆ ಅನಿವಾರ್ಯವಾಗಿ ಸುಬ್ರಮಣ್ಯಕ್ಕೆ ಗೂಡ್ಸ್ ರೈಲ್ಲನ್ನು ಹತ್ತುವ ಪ್ರಸಂಗ ಬಂತು (ಆಮೇಲೆ ಹತ್ತಲಿಲ್ಲ ಅನ್ನುವುದು ಬೇರೆಯ ಮಾತು, ಇದನ್ನ ನನ್ನ ಸಕಲೇಶಪುರ ಟ್ರೆಕ್ ಲೇಖನದಲ್ಲಿ ವಿವರಿಸ್ತಿದೀನಿ), ನಾನು, ವೆಂಕ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಜೊತೆ ಗೂಡ್ಸ್ ರೈಲಿನಲ್ಲಿ ಹೋಗುವುದೆಂದು ತೀರ್ಮಾನಿಸಿದೆವು, ಸರಿ ಅವ್ರೆಲ್ಲ ಅವ್ರ ಕೆಲಸ ಮುಗಿಸಿ ಗೂಡ್ಸ್ ರೈಲ್ ಬರುವ ಹಾದಿಯನ್ನು ಎದುರು ನೋಡ್ತಿದ್ರು, ಅವ್ರ ಸುಪರ್ವೈಸರ್ ಸಹ ಅಲ್ಲಿದ್ರು. ನಾವು ಆ ಕಾರ್ಮಿಕರ ಜೊತೆ ಮಾತಾಡ್ತ ಇದ್ವಿ, ಗೂಡ್ಸ್ ರೈಲ್ ಬರುವ ಸೂಚನೆ ಆ ಸುಪರ್ವೈಸರ್ಗೆ ಗೊತ್ತಾಯ್ತು, ಅವ್ನು ಇಂತ ಕಡೆ ನಿಲ್ಸೋಕೆ ಹೇಳಿದ ಅನ್ಸತ್ತೆ, ಹಾಗಾಗಿ ನಾವು ಹತ್ತಲು ತಯಾರಾಗುತ್ತಿದ್ದೆವು. ಗೂಡ್ಸ್ ರೈಲ್ ಬಂತು, ಆದರೆ ಡ್ರೈವರ್ ಮಹಾಶಯ ನಿಲ್ಲಿಸಲಿಲ್ಲ, ಇನ್ನೊಂದು ಗೂಡ್ಸ್ ರೈಲ್ ಕಾಯುವ ಪರಿಸ್ತಿತಿ ಬಂತು. ಅದ್ಯಾವಗ ಬರತ್ತೋ ದೇವರೇ ಬಲ್ಲ, ಅವ್ನೂ ನಿಲ್ಲಿಸದೆ ಇದ್ರೆ ಇವ್ರ ಗತಿ???
ಹಾಗಂತ ಅವ್ರನ್ನ ಕೇಳಿದಾಗ ಅವ್ರು, ನಿಲ್ಲಿಸದೆ ಇದ್ರೆ ದೋಣಿಗಾಲ್ ರೈಲ್ವೆ ಸ್ಟೇಶನ್ ಹತ್ತಿರ ಬರಬೇಕು, ಆಮೇಲೆ ಅಲ್ಲೆ ಉಳಿದುಕೊಳ್ಳಬೇಕು ಅಂತ ಅಂದ್ರು, ಅದು ಅಲ್ಲಿಂದ 3.5 ಕಿ.ಮೀ., ಯೋಚನೆ ಮಾಡಿ ರಾತ್ರಿ ಇನ್ನೊಂದು ಗೂಡ್ಸ್ ರೈಲ್ ಕಾದು ಮತ್ತೆ ವಾಪಸ್ ಬರಬೇಕು ಅಂದ್ರೆ....
ಎಂತಾ ವ್ಯವಸ್ತೆ, ರೈಲ್ವೆ ಇಲಾಖೆ ಕೋಟಿ ಕೋಟಿ ಲಾಭದಲ್ಲಿ...ಆದರೆ ಅಲ್ಲಿಯ ಕಾರ್ಮಿಕರು ತಮ್ಮ ದೈನಂದಿನ ಕೆಲಸ ಮುಗಿಸಿ ಮನೆಗೆ ಹೋಗುವುದಕ್ಕೆ ಯಾವುದೇ ವ್ಯವಸ್ತೆ ಇಲ್ಲ.
3 ಟೈಯರ್, ಏ.ಸಿ, ಫಸ್ಟ್ ಕ್ಲಾಸ್, ಸೆಕಂಡ್ ಕ್ಲಾಸ್ ಇರೋದು ಒಂದು ಕಡೆ ಆದ್ರೆ ಗೂಡ್ಸ್ ರೈಲ್ನಲ್ಲಿ ಮನೆಗೆ ಹೋಗಿ ತನ್ನ ಕುಟುಂಬ ನೋಡೂದಕ್ಕೆ ಹೆಣಗಾಡೋ ಕಾರ್ಮಿಕ ಇನ್ನೊಂದು ಕಡೆ!!!!!
No comments:
Post a Comment