೧೦) 'ಗ್ಲೋಬಲ್ ವಾರ್ಮಿಂಗ್ ಅಂದ್ರೇನು ಗೊತ್ತಮ್ಮ??' ಎಂದು ಕೇಳಿದ ಮಗನಿಗೆ 'ನನಗೆ ಅದೆಲ್ಲ ಗೊತ್ತಿಲ್ಲ, ನಿಮ್ಮ ಇಂಗ್ಲಿಷ್ ಅರ್ಥ ಆಗಲ್ಲ, ಅದೆಲ್ಲ ಇರ್ಲಿ ಅದೇನು ಅಷ್ಟೊಂದು ಬೆಳಕು ಇದ್ರೂ ಲೈಟ್ ಹಾಕ್ಕೊಂಡು ಪೇಪರ್ ಓದ್ತಿದೀಯ, ಮೊದ್ಲು ಆರಿಸು' ಎಂದಳು ಅವಳಮ್ಮ.
೧೧) ಅವಳು ಅರ್ಧ ಗಂಟೆ ಮೇಕಪ್ ಮಾಡಿಕೊಂಡಾದ ಮೇಲೆ ಬುರ್ಖಾ ಹಾಕಿಕೊಂಡು ಕೆಲಸಕ್ಕೆ ಹೊರಟಳು.
೧೨) ತನ್ನ ಜೀವನವೇ ಛಿದ್ರ ಛಿದ್ರವಾಗಿರುವಾಗ ತನ್ನ ಮನೆಯಲ್ಲಿರುವ ಒಡೆದ ಕನ್ನಡಿಯಿಂದ ಮುಖವನ್ನು ನೋಡದೆ ಇರುವುದರಿಂದ ಆಗುವ ಲಾಭವಾದರೂ ಏನೆಂದು ಅವನು ಹೊಸ ಕನ್ನಡಿಯನ್ನು ತೆಗೆದುಕೊಳ್ಳಲಿಲ್ಲ.
No comments:
Post a Comment