Sunday, April 11, 2010

ಪ್ರಕೃತಿ

ಎತ್ತ ನೋಡಿದರತ್ತ ನಿನದೇ ಚೆಲುವು
ನಿನ್ನ ಮೇಲೆ ನನಗೆಲ್ಲಿಲ್ಲದ ಒಲವು

ಪರ್ವತದ ಮೇಲೆ ಮಂಜಿನ ತೋರಣ
ಅದರ ಮೇಲೆ ರವಿಯ ಹೊನ್ನಿನ ಕಿರಣ

ಅದೋ ಅಲ್ಲಿ ಕಾಮನಬಿಲ್ಲಿನ ಚಿತ್ತಾರ
ಆ ಸಪ್ತವರ್ಣಗಳ ನೋಡುವುದೇ ಸಡಗರ

ಆಗಸದಲ್ಲಿ ಕಾರ್ಮೋಡದ ಆರ್ಭಟ
ಇನ್ನೇನು ಶುರುವಾಗಲಿದೆ ಧರೆಯ ಮೇಲೆ ಅದರಾಟ

ಇಳೆಯ ಮೇಲೆ ಮಳೆಯ ನರ್ತನ
ಎಲೆಯ ಮೇಲೆ ಹನಿಯ ಸಿಂಚನ

ಎಲ್ಲೆಲ್ಲೂ ಹಸಿರ ಹೊದಿಕೆ
ಸಾಲುವುದಿಲ್ಲ ಎರಡೂ ನಯನ ಅದಕೆ

2 comments:

  1. ನಿಮ್ಮ ಕವನದಲ್ಲಿನ ಪದಗಳ ಜೊಡಣೆ ಅದ್ಬುತ...

    ReplyDelete
  2. ಧನ್ಯವಾದ ಅಶ್ವಿನಿ

    ReplyDelete