ಬಹುಶಃ ಇಂತಹದೊಂದು ಆತ್ಮಕಥೆ ಓದ್ತೀನಿ ಅಂತ ಅಂದ್ಕೊಂಡಿರ್ಲಿಲ್ಲ, ಮೀಟರ್ ಆಗಾಗ ಹೇಳ್ತಿದ್ದ. ಆಮೇಲೆ ದೊಡ್ಡ ಗಾತ್ರದ ಪುಸ್ತಕಗಳನ್ನ ಓದೋದಕ್ಕೆ ಯಾಕೋ ಹಿಂಜರಿಕೆ, ಮುಗಿಸೋಕಾಗಲ್ಲ ಅಂತ. ಒಂದು ಸಲ ಪ್ರಯತ್ನ ಕೂಡ ಮಾಡಿದ್ದೆ ಆದ್ರೆ ಕಾಲು ಭಾಗ ಮುಗಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದೆ.
ಮೊನ್ನೆ ಉಲ್ಲಂಗೆ ಕೇಳ್ದೆ ಯಾವ್ದಾದ್ರೂ ಇದ್ರೆ ಕೊಡು ಊರಿಗೆ ಹೋಗ್ತಿದೀನಲ್ಲ ಸಮಯ ಕಳೆಯೋದಕ್ಕೆ ಆಗತ್ತೆ ಅಂದೆ. ಪೂರ್ಣಚಂದ್ರ ತೇಜಸ್ವಿಯವರು ಅನುವಾದಿಸಿರುವ ಪ್ಯಾಪಿಲಾನ್ ಪುಸ್ತಕದ 2 ಭಾಗಗಳನ್ನು ಕೊಟ್ಟ.
ಇವತ್ತಿಗೆ ಒಂದನ್ನು ಮುಗಿಸಿ ಇನ್ನೊಂದನ್ನು ಕೈಗೆತ್ತಿಕೊಂಡಿದ್ದೇನೆ.
ಹತಾಶೆ,ನೋವು,ತಾಳ್ಮೆ,ಸಂಕಷ್ಟ,ಆತ್ಮವಿಶ್ವಾಸ,ನಂಬಿಕೆ,ಭರವಸೆ,ತಳಮಳ,ಬದುಕುವ ಹಂಬಲ,ಮಾನವೀಯತೆ,ಪ್ರಾಮಾಣಿಕತೆ ಇನ್ನೂ ಏನೇನೋ..... ಇವುಗಳ ಕೊನೆಯ ಹಂತ ಯಾವ ಮಟ್ಟದ್ದು ಅಂತ ತಿಳಿದುಕೊಳ್ಳಲು ಇದನ್ನೋದಬೇಕು.
ಯಾವುದೋ ಕ್ಷುಲ್ಲಕ ಕಾರಣಕ್ಕೋ ಅಥವಾ ಬಲವಾದ ಕಾರಣಕ್ಕೋ ತಮ್ಮನ್ನ ತಾವೇ ಬಲಿ ಕೊಡುವವರು ಇದನ್ನೊಮ್ಮೆ ಓದಿದರೆ ಬಹುಶಃ ಅವರಿನ್ನೊಮ್ಮೆ ಅದರ ಬಗ್ಗೆ ಒಂದು ಕ್ಷಣವೂ ಯೋಚಿಸುವುದಿಲ್ಲವೇನೋ.
No comments:
Post a Comment