Thursday, January 21, 2010

ಅ(ಪ್ಪ)ಮ್ಮ

ನವಮಾಸ ನಿನ್ನ ಗರ್ಭದಲ್ಲಿ ನನ್ನ ಸಲಹಿದೆ
ಹೊರಬಂದಾಗ ನನ್ನ ನೋಡಿ ನೀ ಸಂಭ್ರಮಿಸಿದೆ

ನನ್ನ ನಗುವಿಗೆ ನೀ ನಗುವಾದೆ
ನನ್ನ ನೋವಿಗೆ ನೀ ಮರುಗಿದೆ
ನನ್ನ ನಲಿವಿಗೆ ನೀ ನವಿಲಾದೆ

ನನ್ನ ಪುಟ್ಟ ಹೆಜ್ಜೆಗೆ ನೀ ಗೆಜ್ಜೆಯಾದೆ
ನನ್ನ ತೊದಲ ನುಡಿಗೆ ನೀ ಮೊದಲಾದೆ

ನನ್ನ ಬೇಕು ಬೇಡಗಳಿಗೆ ನೀ ಸ್ಪಂದಿಸಿದೆ

ನಾ ಕೇಳಿದೆ ನನ್ನ ಕನಸಲ್ಲಿ ಇದೇಕೆಂದು
ನೀ ಹೇಳಿದೆ ಇದೆಲ್ಲ ನಿನ್ನ ಕರ್ತವ್ಯವೆಂದು
ನಾ ಹೇಳಿದೆ ನೂರು ಜನ್ಮ ಬಂದರೂ ತೀರಿಸಲಾಗದೆಂದು

.............

ಎಲ್ಲ ಸಾಲುಗಳು ಅಮ್ಮನಿಗೆ. ಮೊದಲ ಎರಡು ಸಾಲುಗಳನ್ನು ಬಿಟ್ಟು ಮಿಕ್ಕಿದ್ದು ಅಪ್ಪನಿಗೆ.

2 comments:

  1. ಕವನ ತುಂಬಾ ಚೆನ್ನಾಗಿ ಮೂಡಿದೆ ರೀ.

    ನಾ ಎಡವಿದಾಗ ನೀ ನನಗೆ ಸರಿಪಡಿಸಿದೆ,
    ನನ್ನ ಕಂಬನಿಗೆ ನೀ ನಗುವಿನ ಅಮೃತವ ಸಿಂಪಡಿಸಿದೆ.

    ReplyDelete
  2. ಧನ್ಯವಾದ ಕಣ್ರೀ

    ನಿಮ್ಮ ಸಾಲುಗಳು ಚೆನ್ನಾಗಿದೆ.

    ನಾ ನನ್ನ ನೀ ನಿನ್ನ ಅನ್ನೋ ಪದಗಳಲ್ಲೇ ಎಷ್ಟು ಬರಿಬಹುದು ನೋಡಿ

    ReplyDelete