ಎಲ್ಲೆಲ್ಲೂ ಸಂಭ್ರಮ, ಆಚರಣೆ, ಹರ್ಷೋಧ್ಗಾರ. ೩ರ ವಯಸ್ಸಿನ ಪೋರನಿಂದ ಹಿಡಿದು ೭೦ ದಾಟಿದ ವೃದ್ಧರವರೆಗೂ ಕ್ರಿಕೆಟ್ನದ್ದೆ ಹುಚ್ಚು. ಯಾರಿಗೆ ಆಗುವುದಿಲ್ಲ?? ೨೮ ವರ್ಷಗಳ ನಂತರ, ಅದೂನಮ್ಮ ನೆಲದಲ್ಲಿ ವಿಶ್ವಕಪ್ಪನ್ನು ಗೆಲ್ಲುವುದೆಂದರೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲದವನಿಗೂ ಖುಷಿಯ ವಿಚಾರವೇ. ಧೋನಿಯ ತಾಳ್ಮೆ, ಸಚಿನ್ ಯುವರಾಜ್ ಗಂಭೀರ್ ರೈನಾ ಜಹೀರ್....ಇಡೀ ತಂಡವೇಸಾಂಘಿಕವಾಗಿ ಆಡಿ ಕಪ್ಪನ್ನು ತನ್ನ ಮುಡಿಗೇರಿಸಿಕೊಂಡಿತು.
ಗೆದ್ದ ತಕ್ಷಣವೇ ಬಹುಮಾನಗಳ ಸುರಿಮಳೆ, ಬಿ.ಸಿ.ಸಿ.ಐ ಕೋಟಿ ರೂಪಾಯಿಗಳನ್ನು ಪ್ರತಿಯೊಬ್ಬರಿಗೂ ಘೋಷಿಸಿತು. ಒಪ್ಪತಕ್ಕಂತದ್ದೆ. ಆದರೆ ಇದೇ ನೆಪದಲ್ಲಿ ಬೇರೆ ರಾಜ್ಯ ಸರ್ಕಾರಗಳು ದೊಡ್ಡಪ್ರಮಾಣದ ಉಡುಗೊರೆಯನ್ನು ಕೊಟ್ಟದ್ದು ಎಷ್ಟರ ಮಟ್ಟಿಗೆ ಸರಿ? ಎಲ್ಲ ಆಟಗಾರರನ್ನು ಕರೆದು ಗೌರವಿಸಬಹುದಿತ್ತು. ಅದರಲ್ಲೂ ನಮ್ಮ ರಾಜ್ಯದಿಂದ ಪ್ರತಿಯೊಬ್ಬರಿಗೂ ಒಂದೊಂದು ಸೈಟ್ಕೊಡುತ್ತೇವೆ ಎಂಬ ಘೋಷಣೆ ಬಂತು. ೫೦*೮೦ ಚ.ಅ ವಿಸ್ತೀರ್ಣದ ಸೈಟ್ಗಳು. ೧ ಚ.ಅಗೆ ಕನಿಷ್ಠ ೧೦೦೦ ರೂ ಎಂದರೂ ೪೦ ಲಕ್ಷ :).
ಪ್ರಯೋಜನ ಪಡೆದುಕೊಂಡವರು ಯಾರು?? ಬೆಂಗಳೂರಿನಿಂದ ಸಾವಿರಾರು ಕಿ.ಮೀ ದೂರ ಇರುವ ಆಟಗಾರರು. ಅವರೇನು ಬಡವರೇ?? ಈ ಉಡುಗೊರೆ ಘೋಷಣೆ ಆಗುವುದಕ್ಕೂ ಮೊದಲುಅವರೆಲ್ಲ ಕೋಟ್ಯಾಧಿಪತಿಗಳೇ.
ತನ್ನ ನೆಲದಲ್ಲೇ ಹುಟ್ಟಿ, ಒಲಂಪಿಕ್ಸ್, ಏಷ್ಯನ್ ಗೇಮ್ಸ್ಗಳಲ್ಲಿ ಹಲವು ರಾಷ್ಟ್ರಗಳ ಘಟಾನುಘಟಿಗಳೊಂದಿಗೆ ಸೆಣಸಾಡಿ ಪದಕ ಗೆದ್ದು ತಂದವರಿಗೆ ಇನ್ನೂ ಆ ಸೌಭಾಗ್ಯ ದೊರೆತಿಲ್ಲ.
೧೫ ಸೈಟ್ ಎಂದರೆ ಕನಿಷ್ಠ ೬ ಕೋಟಿ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಮನೆ, ಹೊಲ ಮತ್ತು ಗದ್ದೆಗಳನ್ನು ಕಳೆದುಕೊಂಡು ಸೂರಿಲ್ಲದೆ ಜೀವಿಸುತ್ತಿರುವ ಕೆಲವೇ ಕೆಲವು ಕುಟುಂಬಗಳಿಗೆಸೂರನ್ನು ನಿರ್ಮಿಸಿಕೊಡಬಹುದಾಗಿತ್ತು. ಸಣ್ಣ ಪ್ರಮಾಣದ ಸಾಲ ಮಾಡಿ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತಂದಿರ ಬವಣೆಗಳನ್ನ ಸ್ವಲ್ಪ ಪ್ರಮಾಣದಲ್ಲಿ ನೀಗಿಸಬಹುದಿತ್ತು.
ಮನೆಯ ಮಗ/ಮಗಳೇ ಸಂಕಷ್ಟದಲ್ಲಿರುವಾಗ ಪಕ್ಕದ ಮನೆಯವರು ಸುಖದಲ್ಲಿರುವಾಗ ಅವರಿಗೆ ಸಹಾಯ ಮಾಡುವುದು ಯಾವ ಧರ್ಮ??
No comments:
Post a Comment