ತುಂಬಾ ದಿನಗಳ ಹಿಂದೆ ಉಲ್ಲ ನಾನು ಶಟಲ್ ಆಡೋದಕ್ಕೆ ಹೋಗಿದ್ವಿ, ಆಟ ಆದ್ಮೇಲೆ ಉಲ್ಲ ನಾನು ಕಟಿಂಗ್ ಮಾಡ್ಸೋಕೆ ಹೋಗ್ಬೇಕು. ಚಿಕ್ಕ, ಇಲ್ಲಿ ಹತ್ತಿರದಲ್ಲಿ ಒಳ್ಳೆ ಕಟಿಂಗ್ ಶಾಪ್ ಎಲ್ಲಿದೆ ಅಂದ. ನಮ್ಮ ಮನೆ ಹತ್ತಿರ ಡಿ.ಸಿ.ಸಿ ಬ್ಯಾಂಕ್ ಇದೆಯಲ್ಲಾ ಅದೇ ರಾಜ್ ಕುಮಾರ್ ರೋಡಲ್ಲಿ ಅದರ ಪಕ್ಕ ಇದೆ ಹೋಗು ಅಂದೆ, ಸರಿ ಅಂತ ಹೋದ, ನಾನು ಮನೆಗೆ ಬಂದು ಸ್ನಾನ ಮಾಡಿ ಆಫೀಸಿಗೆ ಹೊರಡೋದಕ್ಕೆ ರೆಡಿಯಾಗ್ತಿದ್ದೆ.
ಉಲ್ಲ ಬಂದ, ಅವ್ನನ್ನ ನೋಡಿ....
ಲೇ, ಈ ಸಂಪತ್ತಿಗೆ ಕಟಿಂಗ್ ಎಲ್ಲಿ ಚೆನ್ನಾಗಿ ಮಾಡ್ತಾರೆ ಅಂತ ಬೇರೆ ಕೇಳ್ಬೇಕಿತ್ತೇ ನನ್ನ ಹತ್ತಿರ ಅಂದೆ.
ಏನಾಗಿರ್ಬಹುದು ಹೇಳಿ...............
.
.
ಬಾಂಡಲಿಯಾಗಿ ಹೋಗಿದ್ದ
Thursday, July 16, 2009
Wednesday, July 15, 2009
ಪುಶ್ ಬ್ಯಾಕ್
ನಿನ್ನೆ ಯಶವಂತಪುರದಲ್ಲಿ ಚಾಲುಕ್ಯ ಎಕ್ಸ್ಪ್ರೆಸ್ ಇಳಿದು ನವರಂಗ್ ಹೋಗಲಿಕ್ಕೆ ಬಸ್ಗೆ ಕಾಯ್ತಿದ್ದೆ, ಒಂದು ಪ್ರೈವೇಟ್ ಬಸ್ ಬಂತು, ಹತ್ತಿ ಬಾಗಿಲ ಹತ್ತಿರ ಖಾಲಿ ಇದ್ದ ಸೀಟಲ್ಲಿ ಹೋಗಿ ಕೂತೆ.
ಸೀಟ್ಗಳು ರಾಜಹಂಸದ ತರ ಇದ್ವು (ಬಸ್ಸೇನೋ ಮಾಮೂಲಿ ಪ್ರೈವೇಟ್ ಗಾಡಿಗಳ ಹಾಗಿತ್ತು), ನಾನು ಕುಳಿತ ಸೀಟ್ ಸ್ವಲ್ಪ ಹಿಂದೆ ಹೋಯ್ತು, ಓ ಪುಶ್ ಬ್ಯಾಕ್ ಇರ್ಬೇಕು (ಆದ್ರೆ ಕೆಳಗೆ ಮೂವ್ ಮಾಡ್ಲಿಕ್ಕೆ ಏನೂ ಇರ್ಲಿಲ್ಲ) ಅಂದ್ಕೊಂಡು ಇನ್ನೂ ಹಿಂದೆ ಮಾಡಣ ಅಂತ ಸೀಟ್ ಹಾಗೆ ಹಿಂದೆ ದೂಡುತ್ತಾ ಹೋದೆ, ಸೀಟ್ ಹಿಂದೆ ಹೋಗ್ತಿತ್ತು.
ಅಷ್ಟರಲ್ಲಿ ಕಂಡಕ್ಟರ್ ಇದ್ದವನು, ಸರ್ ಆ ಸೀಟ್ ಮುರಿದುಹೋಗಿದೆ, ಬೇರೆ ಸೀಟಲ್ಲಿ ಹೋಗಿ ಕುಳಿತುಕೊಳ್ಳಿ ಅಂದ
ವಿಧಿಯಿಲ್ಲದೆ ನನ್ನ ಸೀಟನ್ನು ರಕ್ಷಿಸಿಕೊಳ್ಳಲು ನಾನು ಇನ್ನೊಂದು ಸೀಟಿಗೆ ಹೋಗಿ ಕುಳಿತುಕೊಳ್ಳಬೇಕಾಯಿತು.

Monday, July 13, 2009
ನಂಗೇ ಬಿಸ್ಕಿಟ್
ನಿನ್ನೆ ಬೆಳಗ್ಗೆ ವೆಂಕ (ಕುಲ್ಡ) ನಮ್ಮ ಮನೆಗೆ ಬಂದ, ದಿನಾ ಶಟಲ್ ಆಡ್ತೀವಲ್ಲ ಹಾಗಾಗಿ, ಬ್ಯಾಟ್ ತಗೊಂಡು ಹೊರಟ್ವಿ.
ಶಟಲ್ ಆಡಿ ಆದ್ಮೇಲೆ ಜಿಮ್ಮಿಗೆ ಹೋಗ್ಬೇಕು ಅಂತ ಬೈಕ್ ತಂದು ನಿಲ್ಸಿದ್ದ. ನಾವುಗಳು ಬೈಕ್ ನಿಲ್ಲಿಸೋ ಜಾಗದಲ್ಲಿ ವೆಂಕನೂ ನಮ್ಮ ಮನೆಗೆ ಬಂದಾಗ ನಿಲ್ಲಿಸ್ತಿದ್ದ,
ಮೊನ್ನೆ ರಾತ್ರಿ ಅವ್ನು ಬಂದಿದ್ನಲ್ಲ (ಬೈಕ್ ತಗೊಂಡು ಹೋಗಿದ್ದ). ನಾನು ನಂಬ್ತೀನಿ ಅಂದ್ಕೊಂಡು ನನಗೆ ಬಿಸ್ಕೆಟ್ ಹಾಕ್ಬೇಕು ಅಂದ್ಕೊಂಡು ವೆಂಕ......'ಅಯ್ಯೋ ನಿನ್ನೆ ರಾತ್ರಿ ಬೈಕೇ ತಗೊಂಡು ಹೋಗಿಲ್ಲ ಇಲ್ಲೇ ಬಿಟ್ಟಿದೀನಿ' ಅಂದ.
ಅದಕ್ಕೆ ನಾನು (ಮೀಟರ್ ಬೈಕ್ ವೆಂಕನ ಬೈಕ್ ಹತ್ತಿರ ಇತ್ತು ಆದ್ರೆ ಬಾಬು ಬೆಳಗ್ಗೆ ಅವ್ನ ಫ್ರೆಂಡ್ ಕರ್ಕೊಂಡು ಬಂದು ಒಳಗೆ ನಿಲ್ಸಿದ್ದ),
'ಓ, ನಿನ್ನ ಬೈಕ್ ಬಿಟ್ಟು ಮೀಟರ್ ಬೈಕ್ ತಗೊಂಡು ಹೋಗಿದೀಯಾ' (ಕುಲ್ಡ ಅಲ್ವ ಅದ್ಕೆ, ನನ್ಮಗ ನಂಗೇ ಬಿಸ್ಕಿಟ್ ಹಾಕಿದ್ಯಲ್ಲ ನೋಡೀಗ) ಅಂದೆ.
ನನ್ನ ಮುಖ ನೋಡಿ 'ನನ್ಮಗನೇ' ಅಂದ್ಕೊಂಡು ಸುಮ್ಮನೆ ನನ್ನ ಜೊತೆ ಶಟಲ್ ಆಡೋದಿಕ್ಕೆ ಕಾಲು ಹಾಕಿದ...

Wednesday, July 1, 2009
ಸಿಹಿ ಚಪಾತಿ
ಮೊನ್ನೆ ಹಲಸಿನಹಣ್ಣನ್ನು ಊರಿಂದ ತಂದಿದ್ದೆ, ತೋಳೆ ಬಿಡಿಸಿ ಒಂದು ಪಾತ್ರೆಗೆ ಹಾಕಿಟ್ಟಿದ್ದೆ, ಎಲ್ಲಾ ಕರಗಿ ಹೋಗಿತ್ತು. ಅದನ್ನು ಎಸೆದು ಪಾತ್ರೆ ತೊಳೆಯೋದಕ್ಕೆ ಇಟ್ಟಿದ್ದೆ. ನನ್ನ ಫ್ರೆಂಡ್ ಎಲ್ಲಾ ಪಾತ್ರೆ ತೊಳೆಯೋವಾಗ ಅದನ್ನು ತೊಳೆದು ಇಟ್ಟಿದ್ದ.
ನಾನು ಇವತ್ತು ಊಟಕ್ಕೆ ಆಫೀಸಿಗೆ ಚಪಾತಿ ಮಾಡೋಣ ಅಂದ್ಕೊಂಡು ಆ ಪಾತ್ರೆ ತಗೊಂಡು (ಆಗ ಹಲಸಿನ ಸುವಾಸನೆ ಬರ್ತಿರ್ಲಿಲ್ಲ) ರಾತ್ರಿ ಹಿಟ್ಟು ಕಲಸಿಟ್ಟೆ.
ಬೆಳಗ್ಗೆ ಎದ್ದು ಪಾತ್ರೆ ತೆಗೆದು ನೋಡಿದ್ರೆ, ಹಲಸಿನಹಣ್ಣಿನ ಸುವಾಸನೆ ಗಂ ಅಂತಿತ್ತು, ಅಯ್ಯಯ್ಯೊ ಹಿಂಗಾಯ್ತಲ್ಲ ಅಂದ್ಕೊಂಡು ವಿಧಿ ಇಲ್ಲದೆ ಅದ್ರಿಂದನೇ ಚಪಾತಿ ಮಾಡಿದ್ದು.
ಚಪಾತಿ ಪೂರ್ತಿ ಹಲಸಿನಹಣ್ಣಿನ ಸುವಾಸನೆ, ಪಲ್ಯ ಏನು ಗೊತ್ತೇನ್ರಿ ಬೀಟ್ಱೋಟ್ ಪಲ್ಯ ...

ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ...
ಹೋದ ಭಾನುವಾರ, ಮೀಟರ್ ಅವ್ನ ಫ್ರೆಂಡ್ ಮನೆಗೆ ಹೋಗಿದ್ದ. ನಾನು, ಬಾಬು, ವೆಂಕ, ಶಾಮ ತಿಂಡಿಗೆ ನಳಪಾಕಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಮೀಟರ್ಗೆ ಕಾಲ್ ಮಾಡಿ ಅಲ್ಲಿಗ ಬಾ ಅಂತ ಅಂದ್ವಿ. ನಾವು ನಳಪಾಕಕ್ಕೆ ಹೋಗಿದ್ವಿ, ಆಗ ಮೀಟರ್ ನಮ್ಮ ಮನೆಗೆ ಹೋಗಾದ ಮೇಲೆ ನಂಗೆ ಕಾಲ್ ಮಾಡಿದ, ಎಲ್ಲಿದೀರಪ್ಪಾ ಅಂದ ನಳಪಾಕಕ್ಕೆ ಬಾ ಅಂದ್ವಿ. 2 ನಿಮಿಷದಲ್ಲಿ ಬಂದ, ಬಂದವನೇ ಕೈ ತೊಳೆಯೋದಕ್ಕೆ ಹೋದ.
ನಾನು, ವೆಂಕ ಸುಮ್ನೆ ಅವ್ನ ಕಾಲು ಎಳೆಯೋಣ ಅಂದ್ಕೊಂಡು ಅವ್ನು ಬಂದಾದ ಮೇಲೆ, ಏನು ಮೀಟರ್ ನಿನ್ನ ಫ್ರೆಂಡ್ ಮನೆನಲ್ಲೂ ಬ್ರಷ್ ಮಾಡಿಲ್ಲ, ನಮ್ಮ ಮನೆಯಿಂದ ಬೇರೆ ಬೇಗ ಬಂದೆ, ಇಲ್ಲಿ ಕೈ ತೊಳೆಯೋದಕ್ಕೆ ಹೋದವನು ಬೇಗ ಬಂದೆ, ಕೊನೇ ಪಕ್ಷ ಇಲ್ಲಾದ್ರೂ ಬಾಯಿ ಮುಕ್ಕಳಿಸಿಕೊಂಡು ಬರಬಹುದಿತ್ತಲ್ವ ಅಂತ ಅಂದ್ವಿ.
ಅದ್ಕೆ ಮೀಟರ್, ಹುಲಿ ಸಿಂಹಗಳು ಬ್ರಷ್ ಮಾಡಲ್ಲ ನಿಮ್ಗೆ ಗೊತ್ತಾ ಅಂದ.
ನಾನು, ವೆಂಕ ಅದ್ಯಾಕೆ ಆ ಪ್ರಾಣಿಗಳನ್ನೇ ಹೇಳ್ತೀಯಾ, ಹಂದಿ ಕತ್ತೆಗಳನ್ನು ಹೇಳಬಹುದಿತ್ತಲ್ಲ ಅಂದ್ವಿ (ಮುಂದಿನ ಡೈಲಾಗ್ ಬರತ್ತೆ ಅಂತ ಗೊತ್ತಿತ್ತು, ಅಷ್ಟರೊಳಗೆ ನಮ್ಮ ಬಾಯಿಯಿಂದ ಈ ಮಾತುಗಳು ಹೊರಟಾಗಿತ್ತು).
ಅದ್ಕೆ ಮೀಟರ್, ನಾವು ನಮ್ಮ ಬಗ್ಗೆ ಮಾತಾಡಿದ್ವಿ ನಿಮ್ಮ ಬಗ್ಗೆ ಅಲ್ಲ ಅಂತ ಅನ್ನೋದಾ.....

ಮದುವೆ
ಸುಮಾರು 4-5 ತಿಂಗಳುಗಳಿಂದ ಈ ಪದ ಎಷ್ಟು ಸಲ ಕಿವಿಗೆ ಬಿದ್ದಿದೆಯೋ ದೇವ್ರೇ ಬಲ್ಲ. ರೂಮಿಗೆ ಹೋದ್ರೆ ಹುಡುಗ್ರ ಜೊತೆ, ಅಕ್ಕನ ಮನೆಗೆ (ಬೆಂಗ್ಳೂರಲ್ಲಿ) ಹೋದ್ರೆ, ಇನ್ನೊಬ್ರು ಅಕ್ಕನ ಮನೆಗೆ ಹೋದ್ರೆ, ಊರಿಗೆ ಹೋದ್ರೆ, ಅಕ್ಕನ ಮನೆಗೆ (ಶಿವಮೊಗ್ಗದಲ್ಲಿ) ಹೋದ್ರೆ, ಕಂಪನಿಯಲ್ಲಿ, ಅತ್ತೆ ಮನೆಗೆ ಹೋದ್ರೆ, ಅತ್ತೆ ಮಕ್ಕಳ ಹತ್ರ ಫೋನಿನಲ್ಲಿ ಮಾತಾಡಿದ್ರೆ, ಮನೆಯಲ್ಲಿ ಫೋನ್ ಎತ್ತಿದ್ರೆ, ನಮ್ಮ ಎಲ್ಲಾ ಹುಡುಗ್ರು ಬಂದಾಗ.........
............ಎಲ್ಲಾ ಕಡೆ ಒಂದೇ ಸುದ್ದಿ ಮದುವೆ, ಮದುವೆ, ಮದುವೆ, ಮದುವೆ..............
ನಮ್ಮ ರೂಮಿನಲ್ಲಿರೋ 4 ಜನ ಸ್ವಲ್ಪ ದೂರ ಇರೋ ವೆಂಕನೂ ಇನ್ನೇನು ಯುದ್ಧಕ್ಕೆ ಶುರುವಾಗಿದ್ದಾರೆ ಅಂದ್ರೆ ಎಲ್ಲರೂ ಹುಡುಗಿ ಹುಡುಕ್ತಾ ಇದ್ದಾರೆ, ಹಾಗಾಗಿ ರೂಮಿನಲ್ಲಿ ಪ್ರತಿದಿನ ಮದುವೆಯದ್ದೇ ಸುದ್ದಿ, ಮೀಟರ್, ಬಾಬು, ನಾನು ಆಗಾಗ ವೆಂಕ. ಉಲ್ಲ ಇದಕ್ಕೆಲ್ಲಾ ಬರಲ್ಲ ಯಾಕಂದ್ರೆ ಅವ್ನಿಗೆ ಹುಡುಗಿ ಪಕ್ಕಾ ಆಗಿದ್ದಾಳೆ. ಸೌಜಂಗೆ ಈ ತರದ ತೊಂದ್ರೆಗಳೇ ಇಲ್ಲ ಯಾಕಂದ್ರೆ ಅವ್ನು ಪ್ರೇಮ ವಿವಾಹವಾಗಿದ್ದಾನೆ.
ಊರಿನಲ್ಲಿ ಮನೆ ಕಟ್ಟಿ ಆದ್ಮೇಲೆ ಮದುವೆ ಅಂತ ನಮ್ಮಪ್ಪನ ಲೆಕ್ಕಾಚಾರ, ಮನೆ ಶುರು ಮಾಡೋಕಿಂತ ಮುಂಚೆನೇ ಆಫರ್ಗಳು ಬರೋದಕ್ಕೆ ಶುರುವಾಯ್ತು, ಅಪ್ಪ ಅಮ್ಮ ಮನೆ ಕಟ್ಟಿ ಆದ್ಮೇಲೆ ಮದುವೆ ಅಂತ ಅವ್ರೆಲ್ಲರಿಗೂ ಹೇಳೋದೇ ಆಯ್ತು.
ಸರಿ ಮನೆ ಕಟ್ಟಿ ಆಯ್ತು, ಗೃಹಪ್ರವೇಶನೂ ಆಯ್ತು, ಆ ದಿನ ಬಂದವರಲ್ಲಿ ಒಂದೆರಡು ಜನ (ಅವ್ರು ನಂಗೆ ಅಷ್ಟಾಗಿ ಪರಿಚಯವಿರಲಿಲ್ಲ) ನನ್ನನ್ನು ಏನು ಮಾಡ್ತಿದೀಯಾ, ಯಾವ ಕಂಪನಿ, ಎಲ್ಲಿ ಹೀಗೆಲ್ಲಾ ವಿಚಾರಿಸಿದ್ರು, ನಾನು ಹೀಗೆ ಸುಮ್ನೆ ವಿಚಾರಿಸ್ತಿದ್ದಾರೆ ಅಂತ ಅಂದ್ಕೊಂಡೆ.
ಗೃಹಪ್ರವೇಶ, ಆಯ್ತು..........................
ಸ್ವಲ್ಪ ದಿನ ಆದ್ಮೇಲೆ, ನಮ್ಮ ಊರಿನವರೇ ಒಬ್ರು ಅವ್ರ ಹೆಂಡ್ತಿ ಕಡೆ ಒಂದು ಒಳ್ಳೆ ಕುಟುಂಬ ಇದೆ, ಹುಡುಗಿ ಚೆನ್ನಾಗಿದ್ದಾಳೆ ನೋಡಿ ಅಂದ್ರು. ಸರಿ, ನಮ್ಮಪ್ಪ ಅವ್ರಿಗೆ ಹುಡುಗಿ ಜಾತಕ ಕೊಡೋದಕ್ಕೆ ಹೇಳಿ ಕುಟುಂಬದ ಬಗ್ಗೆ ತಿಳಿದುಕೊಳ್ಳೋ ಪ್ರಯತ್ನ ಶುರು ಮಾಡಿದ್ರು.
ನನ್ನ ಬಗ್ಗೆ ತಿಳಿದುಕೊಳ್ಳೋದಕ್ಕೆ ಹುಡುಗಿ ಕಡೆಯವರು ನನ್ನ ಕಸಿನ್ ಮುಖಾಂತರ ನನ್ನ ಆಫೀಸ್ ವಿಳಾಸ ಮತ್ತೆ ನನ್ನ ಮೊಬೈಲ್ ನಂಬರ್ ಇಸ್ಕೊಂಡ್ರು. ನೋಡ ಮಾರಾಯ, ಅವ್ರು ನಿನ್ನ ಆಫೀಸ್ಗೆ ಬಂದು ನಿನ್ನನ್ನು ಮಾತಾಡಿಸಬಹುದು ಕಣ ಮಾರಾಯ ಅಂತ ನನ್ನ ಕಸಿನ್ ಅಂದ, ಆಯ್ತು ಕಣಪ್ಪ ಹಾಗೆ ಆಗ್ಲಿ ಅಂದೆ.
ಅದಾದ ಮೇಲೆ ನನಗೆ ಪ್ರತಿದಿನನೂ ಯಾರೋ ನನ್ನನ್ನು ಫಾಲೋ ಮಾಡ್ತಿದ್ದಾರೇನೋ ಅನ್ನಿಸೋಕೆ ಶುರುವಾಯ್ತು.ಒಂದಿನ, ನನ್ನ ಆಫೀಸಲ್ಲಿ ಆಫೀಸ್ ಬಾಯ್ ಬಂದಿರ್ಲಿಲ್ಲ, ರಿಸಪ್ಶನಿಷ್ಟ್ ಊಟಕ್ಕೆ ಹೋಗಬೇಕಾಗಿತ್ತು ನನ್ನ ಕಲೀಗ್ಸ್ ಎಲ್ಲಾ ಊಟಕ್ಕೆ ಹೋದ ಕಾರಣ ಅನಿವಾರ್ಯವಾಗಿ ನಾನು ಅಲ್ಲಿ ಕೂರಬೇಕಾಯ್ತು, ಆಗ ನಮ್ಮ ಕಸಿನ್ ಗೆ ಫೋನ್ ಮಾಡಿ ಅಕಸ್ಮಾತ್ ಈಗೇನಾದ್ರೂ ಹುಡುಗಿ ಕಡೆಯವರು ನನ್ನನ್ನು ನೋಡೋದಕ್ಕೆ ಬಂದ್ರೆ ನೋಡಿದ ತಕ್ಷಣ ರಿಜೆಕ್ಟ್ ಮಾಡ್ತಾರೆ ಕಣೋ ಅಂದೆ, ಅವ್ನು ನಿಂಗ್ಯಾಕೋ ಈ ಪರಿಸ್ಥಿತಿ ಬಂತು ಅಂತ ಹೇಳಿ ಕಿತ್ಕೊಂಡು ನಗೋಕೆ ಶುರು ಮಾಡಿದ.
ನಮ್ಮ ಅಮ್ಮನೂ ಫೋನ್ ಮಾಡಿ ಏನ ಮಾರಾಯ, ಫೋನ್ ಎತ್ತಿ ಎತ್ತಿ ಸಾಕಾಗಿ ಹೋಗಿದೆ ನೀನು ಬಾರೀ ಕಷ್ಟ ಕೊಡ್ತಾ (ತಮಾಷೆಗೆ) ಇದೀಯಾ ಅಂದ್ರು, ಏನು ಮಾಡೋದಮ್ಮ ನಿಮ್ಮ ಮಗ ಅಲ್ವ, ನಿಮ್ಮ ಕರ್ತವ್ಯ ಮಾಡ್ಬೇಕು ಅಂದೆ. ಎಲ್ಲೋ ದೂರದಲ್ಲಿದ್ದ ನಮ್ಮಪ್ಪ ನಾನು ಮಾತಾಡ್ತಿದೀನಿ ಅನ್ನೋದು ತಿಳಿದುಕೊಂಡು ಅವ್ನಿಗೆ ಒಂದು 4-5 ಲಕ್ಷ ರೆಡಿ ಮಾಡಿಕೊಂಡಿರೋದಕ್ಕೆ ಹೇಳಿರೋದು ಅಂತ ಹೇಳಿದ್ರು, ನಾನು ಅದ್ಕೆ ಅಮ್ಮ, ಸಾಮುಹಿಕ ವಿವಾಹದಲ್ಲಿ ನಾನೂ ಒಬ್ಬ ಆಗ್ತೀನಿ ಬಿಡು ಅಂದೆ, ಯಾಕೆ ಧರ್ಮಸ್ಥಳಕ್ಕೆ ಹೋಗಿ ಆಗ್ಬಿಡು ಆದ್ರೆ ನಾವು ತೋರ್ಸಿದ ಹುಡುಗಿನಂತೂ ಕಳ್ಸಲ್ಲ ಅಂದ್ರು!!
ಅತ್ತೆಗೆ ಫೋನ್ ಮಾಡಿದ್ದೆ, ಹಿಂಗೆ ಈ ವಿಚಾರ ಮಾತಾಡ್ತಿದ್ದೆ, ಅತ್ತೆ ಇದ್ದವರು ಹುಡುಗಿ 5.7 ಇಂಚು ಅಂತೆ ಕಣೋ ಅಂದ್ರು. ಅತ್ತೆ 1 ಇಂಚು ಜಾಸ್ತಿಯಾಯ್ತಲ್ಲ ಅಂದೆ, 1- 2 ಇಂಚು ಏನು ವ್ಯತ್ಯಾಸ ಆಗಲ್ಲ ಹುಡುಗಿ ಒಳ್ಳೆಯವಳಿದ್ದು ಚೆನ್ನಾಗಿದ್ರೆ ಅಂತ ಅಂದ್ರು, ಆಗಲಿ ಅಂದೆ.
ನಿನ್ನೆ ಅಪ್ಪ ಫೋನ್ ಮಾಡಿ ಒಂದು ಆಫರ್ ಬಂದಿದೆ M.L.A ಮಗಳು ಅಂದ್ರು, ರಾಜಕೀಯ ಅಂದ್ರೆ ನೂರು ಮಾರು ದೂರ ಹೋಗೋ ನಾನು....ಏನಪ್ಪ ಇದು, ಬೇರೆ ಯಾರನ್ನಾದ್ರೂ ನೋಡಿ ರಾಜಕೀಯದವರೆಲ್ಲಾ ಬೇಡ ಅಂದೆ.
------------------------------------------------------------------------------------------------------------------------------------------------ಅಬ್ಬಾ, ಇದೆಕ್ಕೆಲ್ಲಾ ಪೂರ್ಣ ವಿರಾಮ ಇಡೋದಕ್ಕೆ ಇನ್ನೂ ಎಷ್ಟು ದಿನ ಕಾಯ್ಬೇಕೋ?? ಇನ್ನು 4 5 ತಿಂಗ್ಳಿಗೇ ಇಷ್ಟು ಕಥೆಗಳು....ಮುಂದೆ ಮುಂದೆ ಹೋದ್ರೆ ಇನ್ನೆಷ್ಟೋ??

Subscribe to:
Posts (Atom)